Friday, June 5, 2009
ತಾರೆಗಳ ಆರಿಸಿದ ಜಿಪುಣ ದೇವರು!
ಎದೆ ತುಂಬ
ಹಣತೆ
ಹಚ್ಚಿಟ್ಟೆ
ನಾಳೆಗೆ ನೀಲಿ ಆಕಾಶದಿ
ಆ ಜಿಪುಣ ದೇವರು
ತಾರೆಗಳ
ಆರಿಸುವುದನರಿತು!
ಕದವಿಕ್ಕಿ ಗಾಳಿ ಬಚ್ಚಿಟ್ಟೆ
ಓ ಮಂದಾರ
ಸ್ಪರ್ಷಿತ
ದೂಳೆ
ಹಾಯುವುದಾದರೆ ಈ ಕಡೆ
ಸ್ವಲ್ಪ ಬೇಗನೆ
ಹೊರಡುವುದೊಳಿತು
ಇಲ್ಲ ಅರಣ್ಯಗಳ ಸಾಮೂಹಿಕ ಹತ್ಯೆಗೆ
ಆಜ್ಞಾಪಿಸಬಹುದು
ಆ ಕೊಲೆಗಡುಕನಿನ್ನು !
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment