ಸುಳ್ಳೆ ನಗತಾಳ ತಮ್ಮ ಸಣ್ಣ ಹುಡುಗಿ
ಹೊಳ್ಳೊಳ್ಳಿ ನೋಡುತಾಳ ದೊಡ್ಡ ಹುಡುಗಿ
ತುಂಬಿದ ಕೊಡ ಚೆಲ್ಲಿ ಬರುತಾಳ ನೀರಿಗೆ
ಸಣ್ಣಾಕಿ ಅಂತಾಳ ಬಾ ಹೊರೆಸು ತಲಿಗೆ
ಅತ್ತಿತ್ತ ಹೊರಳುತ್ತ ಚಿತ್ತ ನನ್ನತ್ತ ಬಿತ್ತ
ದೊಡ್ದಾಕಿ ನಕ್ಕಾಗ ಹೊತ್ತು ಮುಳಗಿತ್ತ
ಅಂಟಿಸಿ ಸಣ್ಣಾಕಿ ಗೋಡೆಗೆ ಹರಳ
ನಾಚುತ್ತ ಬಾಚ್ಯಾಳ ಕೂದಲ ಇರುಳ
ಅಂಗಳ ರಂಗೋಲಿ ಸವದಿಲ್ಲ ಹಗಲ
ದೊಡ್ದಾಕಿ ಬಿಡಿಸ್ಯಾಳ ಚುಕ್ಕಿಯ ಮುಗಿಲ
ಗೆಳತ್ಯಾರ ಕೂಡಿಕೊಂಡು ಬರತಾಳ ಗುಡಿಗೆ
ಸಣ್ಣಾಕಿ ಮನಸೆಲ್ಲ ಮತ್ತ್ಯಾರೋ ಕಡಿಗೆ
ಕಟ್ಟಿದ ದನ ಬಿಚ್ಚಿ ಬಿಟ್ಟಾಳ ಹೊಳಿಗೆ
ದೊಡ್ದಾಕಿ ಬಂದಾಳ ಹುಡುಕೂತ ಮಳಿಗೆ
ಹೋದಲ್ಲಿ ಬಂದಲ್ಲಿ ಕದ್ದು ನೋಡ್ಯಾರ
ಮಂದಿ ಮಕ್ಕಳ ಎತ್ತು ಮುದ್ದು ಮಾಡ್ಯಾರ
ಸುಳ್ಳೇ ನಗತಾರ ಗೆಳೆಯ ಅಕ್ಕ ತಂಗ್ಯಾರು
ಒಳ್ಳು-ಒಣಕಿಗೆ ಸಿಕ್ಕಿನಂತ ಮಂದಿ ಅಂತಾರು
No comments:
Post a Comment