
ಏ ಗೆಳತಿ
ಬಯಸದಿರು
ಮಂಜಿಲ್ ಮಹಲ್ ಗಳ
ಇಟ್ಟಿಗೆ ಸಿಗದ ಈ ತುಟ್ಟಿ
ಕಾಲದಲ್ಲಿ ಕಟ್ಟಿಸಲಾರೆನು
ಗೋರಿ ಗುಮ್ಮಟಗಳ
ಏಕೆಂದರೆ ಅಲ್ಲಿ ನನ್ನ ಜನತೆಗೆ ಇನ್ನು
ಜನತಾ ಮನೆ ಸಿಕ್ಕಿಲ್ಲ!
ಗೂಡಿನ ತುಂಬ ಚಂದ್ರ ಬಿಂಬ
ನಕ್ಷತ್ರ ಎದೆ ತುಂಬ
ಬೆಳದಿಂಗಳ ತಾಕುವ
ಇರಾದೆ ಇದ್ದರೆ ಇಳಿದು ಬಾ
ನನ್ನ ಮನದಾಳದ ಓಣಿಗಳಲಿ
ಗೋಣಿ ಚೀಲಗಳ ಹೊದ್ದ
ಆ ಮಾಂಸ ಮುದ್ದೆಗಳ ಕಂಡೂ
ಬರುವ ಬಯಕೆಯಿದ್ದರೆ
ಜೊತೆಗೊಂದಿಷ್ಟು ಕಣ್ಣೀರು ತಾ !
1 comment:
'ನದಿ ತೀರ'ದ ವಿಹಾರ ಚೆನ್ನಾಗಿದೆ!!!!!!!!!!!!!!!!
Post a Comment